ಕನ್ನಡ ಈ ನಾಡಿನ ಮಾತೃ ಭಾಷೆ ಮಾತ್ರ ಆಗದೆ ಬಹು ಜನರ ಜೀವನವಾಗಿ, ಕೆಲವರ ಹವ್ಯಾಸವಾಗಿ ಸಂಭ್ರಮದಲಿರುವುದು ನೋಡಿದರೆ ಕನ್ನಡದ್ ಕೀರ್ತಿ ಅರಿವಾಗುತ್ತದೆ ಆದರೆ ಈ ಕೀರ್ತಿಯ ದಿಂಡಿಮವ ಮುಂದಿನ ಪೀಳಿಗೆಗೆ ಬಾರಿಸುವ ಜವಾಬ್ದಾರಿಯ ಬಗೆ ಮಾತನಾಡುವುದಾದರೆ ಹಲವಾರು ಜನ, ಸರ್ಕಾರ, ಸಂಘ-ಸಂಸ್ಥೆಗಳು ಶ್ರಮಿಸುತ್ತಿರುವುದನು ನಾವು ಕಾಣಬಹುದು ಇವುಗಳು ಕನ್ನಡ ಭಾಷೆಗೆ ಶಕ್ತಿ ತುಂಬುವುದರಲ್ಲಿ ತಮ್ಮ ಪಾತ್ರವನು ಬಲು ನಿಷ್ಠೆಯಿಂದ ಮಾಡುತ್ತಿರುವುದು ಸತ್ಯ.
ಕನ್ನಡದ ಕೀರ್ತಿಯ ದಿಂಡಿಮವ ಬಾರಿಸುತ್ತಾ ಸದಾ ಮೆರಗಲ್ಲಿರಲು ಕನ್ನಡವೂ ಬರಿ ಭಾಷೆ ಆಗಿ ಉಳಿದರೆ ಸಾಲದು ಅದು ಬದುಕಾಗಿಯೂ ಉಳಿಯಬೇಕು. ಕನ್ನಡ ನಮ್ಮ ಬದುಕಾಗ ಬೇಕೆಂದರೆ ಅದರ ಕಲೆ ಸಾಹಿತ್ಯ ಹಾಗು ಸಂಸ್ಕೃತಿಯ ಮೌಲ್ಯಗಳ ಜೊತೆಗೆ ಬೆಳೆಯಬೇಕು. ಕನ್ನಡದ ಕೀರ್ತಿಯ ಮೆರುಗಲ್ಲಿರುವವರೆಲರು ಕನ್ನಡದ ಜೊತೆಗೆ ಬೆಳದು ಬದಕುತ್ತಿರುವರು ಆದರೆ ಈಗಿನ ಬಹುತೇಕ ಮಕ್ಕಳ ಬಾಲ್ಯದಲ್ಲಿ ಕನ್ನಡ ಬರಿ ಒಂದು ಭಾಷೆಯ ಪಠ್ಯಕ್ರಮವಾಗಿ ಅವರ ಬೆಳವಣಿಗೆಯಲ್ಲಿ ತನ್ನ ಮಹತ್ವದ ಪಾತ್ರವನು ಕಳೆದುಕೊಂಡಂತಿದೆ.
ನಮ್ಮ ಬಾಲ್ಯದಲ್ಲಿ ನಮ್ಮ ಬಹುತೇಕ ಕಲಿಕೆ ಕನ್ನಡ ಮಾಧ್ಯಮದಲ್ಲಿ ವಾಗಿರುತ್ತಿತು. ಈಗ ನೋಡುವದಾದರೆ ಇದರ ಸಂಪೂರ್ಣ ವಿರುದ್ಧವಾಗಿ ಆಂಗ್ಲ ಶಾಲೆಗಳ ಸಂಖ್ಯೆ ಹೆಚ್ಚಾಗಿ ಕನ್ನಡ ಶಾಲೆಗೆ ಹೋಗಿ ಕನ್ನಡದಲ್ಲಿ ಕಲಿಯುವ ವಿದ್ಯೆಯ ಸೊಗಸು ಬಹುತೇಕ ಮರೆಯಾಗಿದೆ. ಈ ಪರಿವರ್ತನೆಯನ್ನು ಪ್ರಶ್ನಸಿದಾಗ ಬರುವ ಉತ್ತರವೂ ಕನ್ನಡ ಶಾಲೆಗಳು ಸರ್ಕಾರದಾಗಿರುವದರಿಂದ ಅವುಗಳ ಗುಣಮಟ್ಟ ಕುಗ್ಗಿದೆಯೆಂದು ಹಾಗಾದರೆ ಖಾಸಗಿಯವರು ಯಾಕೆ ಕನ್ನಡ ಶಾಲೆಗಳನ್ನು ತೆರೆಯುತ್ತಿಲ ಇದಕ್ಕೆ ಉತ್ತರ ಅದರಲ್ಲಿ ಅವರಿಗೆ ಬೇಡಿಕೆ ಕಾಣದಿರುವುದು.
ನಾವು ಮಕ್ಕಳಿಗೆ ಕನ್ನಡ ಕಲಿಸಲು ಯಾಕೆ ಹಿಂಜರಿಯುತಿದ್ದೇವೆ ಎಂಬುದು ತಿಳಿಯದ ಸಂಗತಿ ನೋಡುವಾದದ್ದರೆ ಈಗಿನ ಹೆಚ್ಚಿನ ನಾಯಕರು, ಬುದ್ಧಿಜೀವಿಗಳು, ಸಾಹಿತ್ಯ, ಕಲೆ, ಸಮಾಜ, ತಂತ್ರಜ್ಞಾನದಲ್ಲಿ ಆವಿಷ್ಕಾರಗಳನ್ನು ಮಾಡಿರುವರು ಎಲರೂ ಕನ್ನಡ ಶಾಲೆಗಳಲ್ಲಿಯೇ ಕಲಿತು ಜಗತ್ ಪ್ರಖ್ಯಾತರಾಗಿರುವವರು ಹಾಗು ಅವರಿಗೆಲ್ಲರಿಗೂ ಈಗಿರುವ ಕನ್ನಡದ ಕಾಳಜಿಗೆ ಕಾರಣ ಇವೆ ಶಾಲೆಗಳ ಪೋಷಣೆ ಎಂದರೆ ತಪ್ಪಾಗುವದಿಲ್ಲ.
ದಿನನಿತ್ಯದಲ್ಲಿಯೂ ಕೂಡ ಮಕ್ಕಳು ಆಡುವಾಗು, ನಮ್ಮೊಂದಿಗೆ ಮಾತನಾಡುವಾಗ, ಹೊಸ ವಸ್ತುವನ್ನು ಪರಿಚಸುವಾಗ ಕನ್ನಡವನ್ನು ನಿರ್ಲಕ್ಷಿಸಿ ಆಂಗ್ಲ ಬಾಷೆಯಲ್ಲಿ ಪರಿಚಯಿಸುತ್ತೆವೆ ಇವೆಲ್ಲವು ಚಿಕ್ಕ ಸಹಜ ವಿಷಯಗಳೇ ಆಗಿರಬಹುದು ಆದರೆ ಬಾಲ್ಯದಲ್ಲಿ ಕನ್ನಡದಕಿಂತ ಬೇರೆ ಭಾಷೆಯ ಜೊತೆಗೆ ಬೆಳದ ಮಕ್ಕಳು ಮುಂದೆ ಕನ್ನಡದ ಪ್ರೀತಿಯ ಅರಿಯದೆ ಅವರು ಬೆಳದ ಭಾಷೆಯ ಜೊತೆ ಬದಕುವುದು ಅಷ್ಟೇ ಸಹಜ ವಿಷಯ.
ಈ ಸರಳ ಅರಿವು ತಿಳಿಸಲು ಯಾವುದೇ ಸರ್ಕಾರದ ಕ್ರಮವಾಗಲಿ ಯಾರುದೋ ಸಲಹೆಯಾಗಲಿ ಬೇಕಾಗುವುದಿಲ್ಲ ಇದ್ದು ಬದಲಾಗದೆ ಹೋದರೆ ಕಾಲಮಾನದಲ್ಲಿ ಕನ್ನಡದ ಮೆರಗು ಕ್ರಮೇಣವಾಗಿ ಕ್ಷೀಣಿಸುವುದರಲ್ಲಿ ಸಂದೇಹವಿಲ್ಲ.
Comments
Post a Comment