Skip to main content

Posts

Showing posts with the label ಮಕ್ಕಳು

ಬದುಕಾಗಬೇಕು ಕನ್ನಡ

ಕನ್ನಡ ಈ ನಾಡಿನ ಮಾತೃ ಭಾಷೆ ಮಾತ್ರ ಆಗದೆ ಬಹು ಜನರ ಜೀವನವಾಗಿ, ಕೆಲವರ ಹವ್ಯಾಸವಾಗಿ ಸಂಭ್ರಮದಲಿರುವುದು ನೋಡಿದರೆ ಕನ್ನಡದ್ ಕೀರ್ತಿ ಅರಿವಾಗುತ್ತದೆ ಆದರೆ ಈ ಕೀರ್ತಿಯ ದಿಂಡಿಮವ ಮುಂದಿನ ಪೀಳಿಗೆಗೆ ಬಾರಿಸುವ ಜವಾಬ್ದಾರಿಯ ಬಗೆ ಮಾತನಾಡುವುದಾದರೆ ಹಲವಾರು ಜನ, ಸರ್ಕಾರ, ಸಂಘ-ಸಂಸ್ಥೆಗಳು ಶ್ರಮಿಸುತ್ತಿರುವುದನು ನಾವು ಕಾಣಬಹುದು ಇವುಗಳು ಕನ್ನಡ ಭಾಷೆಗೆ ಶಕ್ತಿ ತುಂಬುವುದರಲ್ಲಿ ತಮ್ಮ ಪಾತ್ರವನು ಬಲು ನಿಷ್ಠೆಯಿಂದ ಮಾಡುತ್ತಿರುವುದು ಸತ್ಯ. ಕನ್ನಡದ ಕೀರ್ತಿಯ ದಿಂಡಿಮವ ಬಾರಿಸುತ್ತಾ ಸದಾ ಮೆರಗಲ್ಲಿರಲು ಕನ್ನಡವೂ ಬರಿ ಭಾಷೆ ಆಗಿ ಉಳಿದರೆ ಸಾಲದು ಅದು ಬದುಕಾಗಿಯೂ ಉಳಿಯಬೇಕು. ಕನ್ನಡ ನಮ್ಮ ಬದುಕಾಗ ಬೇಕೆಂದರೆ ಅದರ ಕಲೆ ಸಾಹಿತ್ಯ ಹಾಗು ಸಂಸ್ಕೃತಿಯ ಮೌಲ್ಯಗಳ ಜೊತೆಗೆ ಬೆಳೆಯಬೇಕು. ಕನ್ನಡದ ಕೀರ್ತಿಯ ಮೆರುಗಲ್ಲಿರುವವರೆಲರು ಕನ್ನಡದ ಜೊತೆಗೆ ಬೆಳದು ಬದಕುತ್ತಿರುವರು ಆದರೆ ಈಗಿನ ಬಹುತೇಕ ಮಕ್ಕಳ ಬಾಲ್ಯದಲ್ಲಿ ಕನ್ನಡ ಬರಿ ಒಂದು ಭಾಷೆಯ ಪಠ್ಯಕ್ರಮವಾಗಿ ಅವರ ಬೆಳವಣಿಗೆಯಲ್ಲಿ ತನ್ನ ಮಹತ್ವದ ಪಾತ್ರವನು ಕಳೆದುಕೊಂಡಂತಿದೆ. ನಮ್ಮ ಬಾಲ್ಯದಲ್ಲಿ ನಮ್ಮ ಬಹುತೇಕ ಕಲಿಕೆ ಕನ್ನಡ ಮಾಧ್ಯಮದಲ್ಲಿ ವಾಗಿರುತ್ತಿತು. ಈಗ ನೋಡುವದಾದರೆ ಇದರ ಸಂಪೂರ್ಣ ವಿರುದ್ಧವಾಗಿ ಆಂಗ್ಲ ಶಾಲೆಗಳ ಸಂಖ್ಯೆ ಹೆಚ್ಚಾಗಿ ಕನ್ನಡ ಶಾಲೆಗೆ ಹೋಗಿ ಕನ್ನಡದಲ್ಲಿ ಕಲಿಯುವ ವಿದ್ಯೆಯ ಸೊಗಸು ಬಹುತೇಕ ಮರೆಯಾಗಿದೆ.  ಈ ಪರಿವರ್ತನೆಯನ್ನು ಪ್ರಶ್ನಸಿದಾಗ ಬರುವ ಉತ್ತರವೂ ಕನ್ನ...